ಮಧ್ಯಾನ್ಹ ..! ಮೋಡದ  ನಡುವೆಯಿಂದ  ಸೂರ್ಯನ ಕಿರಣಗಳು ಮೆಡಿಕಲ್  ಕಾಲೇಜಿನ ಕ್ಯಾಂಪಸ್ ನಲ್ಲಿರುವ ಹುಲ್ಲು ಹಾಸಿನ ಮೇಲೆ ಚದುರಿತ್ತು. ಹೊಳೆವ ಹುಲ್ಲುಗಾವಲಿನ ಅಂಚಿಗೆ ನೆಟ್ಟ ರಂಗುರಂಗಿನ ಹೂಗಿಡಗಳು ಗಾಳಿಯ ನಾದಕ್ಕೆ ನಯವಾಗಿ ನರ್ತಿಸುತ್ತಿತ್ತು. ವಿವಿಧ ಬಣ್ಣಗಳ ತುಂಬಿಕೊಂಡ ಪ್ರಕೃತಿ  ಸೌಂದರ್ಯವನ್ನು ಆಸ್ವಾದಿಸುತ್ತಾ ಮನ ಬಣ್ಣಗಳ ಲೋಕಕ್ಕೆ ಅರಿವಿಲ್ಲದಂತೆ ಶರಣಾಗಿತ್ತು

ನಮ್ಮಪ್ಯಾಥೋಲಾಜಿಯೂ ಒಂದುಬಣ್ಣದ ಲೋಕಅಲ್ಲವೇ? . ಕೌಶಲ್ಯದಲ್ಲಿ ಬಣ್ಣಗಳಿಲ್ಲದಿದ್ದರೆ , ಅವುಗಳ ಬಣ್ಣಿಸುವ ಕಂಗಳಿಲ್ಲದಿದ್ದರೆ, ಕಂಗಳಿಗೆ ಬಣ್ಣಗಳ ದರ್ಶನ ಮಾಡಿಸುವ ಬೆಳಕು ಇಲ್ಲವಾದರೆಬದುಕೇಇಲ್ಲ…. ‘ರೋಗ ಲಕ್ಷಣ ಶಾಸ್ತ್ರ ಜೀವಾಳಬಂಡವಾಳಗಳು…  ‘ಬಣ್ಣ.. ಕಣ್ಣು.. ಬೆಳಕು  ಮತ್ತು ಇವುಗಳನ್ನೆಲ್ಲಾ  ಏಕೀಕರಿಸಿ ರೋಗನಿರ್ಧಾರಕ್ಕೆ ಪೂರಕವಾಗುವಸೂಕ್ಷ್ಮ ದರ್ಶಕ  ಯಂತ್ರ‘ . ಇವುಗಳೊಂದಿಗೆ ಅತಿ ನಾಜೂಕಾಗಿ , ಸಹನೆಯಿಂದ ನೋಡುವ ಮನಸ್ಸು ಹಾಗು ವಿಷಯದ ಬಗ್ಗೆ ಅಗಾಧ ಜ್ಞಾನವುಳ್ಳ ಮೆದುಳು  ಒಂದಾಗಲು ಅದುವೇರೋಗಲಕ್ಷಣ ಶಾಸ್ತ್ರಜ್ಞನ ಬದುಕು‘.. !

 

ರವಿ ಕಾಣದ್ದನ್ನು ಕವಿ ಕಾಣುತ್ತಾನೆಎಂಬುವಂತೆ ಚಿಕಿತ್ಸಕನಾಗಿರುವ ವೈದ್ಯ ತನ್ನ ರೋಗಿಯಲ್ಲಿ ಪತ್ತೆ ಮಾಡದ್ದನ್ನು.. ಊಹಿಸದ್ದನ್ನು ಪ್ಯಾಥೋಲಾಜಿಸ್ಟ್ಗಳು ಅನೇಕ ಬಾರಿ ನಿಖರವಾಗಿ ಪತ್ತೆ ಹಚ್ಚುವಲ್ಲಿ ಅನುವಾಗುತ್ತಾರೆ  ಹಾಗು  ರೋಗಿಯ ಸೂಕ್ತ ಚಿಕಿತ್ಸೆಗೆ ನೆರವಾಗುತ್ತಾರೆ. ಹೀಗೆ ತೆರೆಮರೆಯ ಹಿಂದೆಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುವ ರೋಗಲಕ್ಷಣ ಶಾಸ್ತ್ರಜ್ಞನು ಗಾಜಿನ ಚೂರಿನ ಮೇಲಿನ ಬಣ್ಣದ ಚಿತ್ರಣವನ್ನು ತನ್ನ ಜ್ಞಾನದ ಮುಖಾಂತರ ಜೀವಂತವಾಗಿಸುತ್ತಾನೆ. ಬಣ್ಣ ತುಂಬಿಕೊಂಡ ಜೀವಕೋಶ, ಕೋಶಭಿತ್ತಿ, ಕೋಶಬೀಜ, ಅಂಗಾಂಶಗಲ್ಲಿ ಜೀವಕೋಶಗಳ ವ್ಯವಸ್ಥೆ, ಅವುಗಳ ಸ್ಥಿತಿಗತಿ ಮುಂತಾದವುಗಳನ್ನು ತುಲನಾತ್ಮಕವಾಗಿ ಅವಲೋಕಿಸಿರೋಗ ನಿರ್ಧಾರಮಾಡುತ್ತಾನೆ  ನಿಟ್ಟಿನಲ್ಲಿ ರೋಗಿಯ ಸಂಪೂರ್ಣ ಚಿತ್ರಣ, ಅವನ ಕಾಯಿಲೆಯ ಹಿನ್ನಲೆಯನ್ನು ರೋಗಲಕ್ಷಣ ಶಾಸ್ತ್ರಜ್ಞ ತಿಳಿದುಕೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ. ರೀತಿಯಾಗಿ ವಿವಿಧ ಕಾಯಿಲೆಯನ್ನು ಪತ್ತೆಮಾಡಲೆಂದೇ ಹುಟ್ಟಿಕೊಂಡಿರುವ ವೈದ್ಯಶಾಸ್ತ್ರದ ಬಹು ಮುಖ್ಯ ವಿಭಾಗ ಪ್ಯಾಥಾಲಜಿಇದು ಅಮೋಘ ಕಲೆ.. ಅಮೂಲ್ಯ ವಿಜ್ಞಾನ.

 

 

ಪ್ರತಿಬಾರಿ ರೀತಿಯಾಗಿ ರೋಗನಿರ್ಧಾರ ಮಾಡುವಾಗ ಅನೇಕ ರೋಚಕ ಅನುಭವಗಳಾಗುತ್ತವೆಕೆಲವೊಮ್ಮೆ ನಾವು ರೋಗಿಯ ವಿಷಯದಲ್ಲಿ ಗುಡ್ ನ್ಯೂಸ್ ಕೊಡುವ ಆಪ್ತ ಸಖರಾದರೆ ಮತ್ತೆ ಕೆಲವೊಮ್ಮೆ ರೋಗಿ ಅರಗಿಸಿಕೊಳ್ಳಲಾಗದಿರುವ ಕೆಟ್ಟ ಸುದ್ಧಿ ನೀಡುವಯಮದೂತರು ಹೌದು! . ಆದರೆ ಇದೆಲ್ಲ ನೇರವಾಗಿ ನಡೆಯದೆ, ವರದಿ  ಅಥವಾ ರಿಪೋರ್ಟ್ ಮುಖಾಂತರವೇ ರೋಗಿಯನ್ನು, ಅವರನ್ನು ಪರೀಕ್ಷಿಸುವ ವೈದ್ಯನನ್ನು ಮುಟ್ಟುತ್ತದೆ.  ಇನ್ನು ತುಂಬಾ ಪೀಠಿಕೆ ಬೇಡನೇರವಾಗಿ ವಿಷ್ಯಕ್ಕೆ ಬರ್ತೀನಿ.. ಬಣ್ಣದ ಲೋಕದಲ್ಲಿ ಪಯಣಿಸುವಾಗ ಗಾಜಿನ ಚೂರಿನ ಮೇಲೆ ಮೂಡಿದ ಎರಡು ರೋಚಕ ಅನುಭವಗಳನ್ನು ನಾನೀಗ ಹೇಳಲು ಹೊರಟಿದ್ದೇನೆ.. ಪ್ಲೀಸ್ ಕೇಳಿ… !

            ಮೊದಲನೆಯ ಕತೆತೀರಾ ಇತ್ತೀಚಿನದು.. ಎಪ್ಪತ್ತರ ಹರೆಯದ ಅಂಕಲ್ .. (ಅಜ್ಜ ಎಂದರೆ ಬೇಜಾರಾಗಬಹುದೇನೋ!).. ಮೂರು ತಿಂಗಳ ಹಿಂದೆ ಗಂಟಲಲ್ಲಿ ಗಂಟು ಕಂಡುಬಂದು ಆತನಿಗೆ ಈಗ ಅದರಿಂದ ಸ್ವಲ್ಪ ನೋವು ಉಂಟಾಗಿರುವುದರಿಂದ ಪರೀಕ್ಷೆಗೆಂದು ಸನಿಹದ ಆಸ್ಪತ್ರೆಗೆ ಧಾವಿಸಿದ. ವೈದ್ಯರು ಅವರನ್ನು ಪರೀಕ್ಷಿಸಿ ಥೈರಾಯಿಡ್ ಗ್ರಂಥಿ ದೊಡ್ಡದಾಗಿದೆ, ಕಾರಣ ಏನು ? ಎಂಬುದನ್ನು ಪತ್ತೆ ಹಚ್ಚಲು ಗಂಟಲು ಸ್ಕ್ಯಾನಿಂಗ್ ಮತ್ತು ಎಫ್ .ಎನ್ . .ಸಿ (ಸೂಕ್ಷ್ಮ ಸೂಜಿ ಪರೀಕ್ಷೆ) ಮಾಡಿಸಿಕೊಳ್ಳಬೇಕಾಗಿ ಹೇಳಿದರು. ತದನಂತರ ಅಂಕಲ್ ಗಂಟಲಿನ ಸ್ಕ್ಯಾನಿಂಗ್ ಮುಗಿಸಿ ಸೂಜಿ ಪರೀಕ್ಷೆಗೆ  ಸೈಟೊಲೊಜಿ ಕೊಠಡಿಗೆ ಧಾವಿಸಿದ . ನಾವು ಆತನನ್ನು ಪರಿಚಯಿಸಿಕೊಂಡು ಪರೀಕ್ಷೆ ಮಾಡುವ ಕೋಣೆಗೆ ನಡೆಯುವಂತೆ ತಿಳಿಸಿದೆವು. ನನ್ನೊಟ್ಟಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಕರೆದುಕೊಂಡು ಅವನನ್ನು ಪರೀಕ್ಷಿಸಲು ಮುಂದಾದೆವು. ಅವರ   ಕಾಯಿಲೆಯ ಹಿನ್ನಲೆಯನ್ನು ವಿಚಾರಿಸುವಾಗ ಅವರಿಗೆ ಗಂಟು ಐದಾರು ವರ್ಷದ ಹಿಂದೆಯೇ ಇದ್ದು , ಅದನ್ನುಗಳಗಂಡ (goitre )’ ಅಂತ ಭಾವಿಸಿ ಅವರು ಚಿಕಿತ್ಸೆ ಪಡೆಯಲು ಮುಂದಾಗಲಿಲ್ಲ . ಇತ್ತೀಚಿಗೆ ಗಂಟು ವೇಗವಾಗಿ ಬೆಳೆಯುತ್ತಿದ್ದನ್ನು ಗಮನಿಸಿ ಭಯದಿಂದ ಅಂಕಲ್ ಪರೀಕ್ಷೆಗೆ ಬಂದರಂತೆ. ಮಕ್ಕಳೆಲ್ಲ ವಿದ್ಯಾವಂತರು , ಉದ್ಯೋಗ ನಿಮಿತ್ತ ವಿದೇಶದಲ್ಲಿರುವವರು .. ಹೆಂಡತಿ  ವಿಧಿವಶಳಾಗಿ ನಾಲ್ಕು  ವರ್ಷಗಳಾಗಿತ್ತು

ಒಂದು ವೇಳೆ ಆಪರೇಷನ್ ಬೇಕಾದರೆ ನೋಡಿಕೊಳ್ಳಲು ಯಾರೂ ಬರುವುದಿಲ್ಲ ಎಂಬ ಭಯದಿಂದ  ಅಂಕಲ್ ಆಸ್ಪತ್ರೆಯ ಕಡೆ ಮುಖ ಮಾಡಲಿಲ್ಲ. ‘ಸಂಸಾರಎಂದರೆ ಹೀಗೆಯೇ.. ಮಕ್ಕಳು ರೆಕ್ಕೆ ಬಲಿತ ಹಕ್ಕಿಯಾಗಿ ದೂರ ಹೋಗಿ ಅವರ ಬದುಕು ಕಟ್ಟಿಕೊಳ್ಳುವಾಗ ಹೆತ್ತವರು ಒಂಟಿಯಾಗುತ್ತಾರೆ, ಪ್ರತಿದಿನ ಭಯದಿಂದ ಬದುಕಲಾರಂಭಿಸುತ್ತಾರೆ.. .. ಖಿನ್ನತೆಯಿಂದ ಬಳಲುತ್ತಾರೆ.. ಇದೆ ಇಂದಿನ ವಾಸ್ತವ… ! ‘ ಬರುವಾಗ ಒಬ್ಬನೇ.. ಹೋಗುವಾಗ ಒಬ್ಬನೇ..?’ ಸತ್ಯ ಅರಿಯಲಾರಂಭಿಸುತ್ತಾರೆ . ಇಷ್ಟೆಲ್ಲಾ ವಿಷಯಗಳು ನನ್ನ ತಲೆಯಲ್ಲಿ ಹಾದು  ಹೋಗುವಾಗ ಅವರ ಗಂಟಿನ ರಸವನ್ನು ಸೂಕ್ಷ್ಮ ಸೂಜಿಯ ಮೂಲಕ ತೆಗೆದು ಜಾರುಗಾಜುಗಳ (slide ) ಮೇಲೆ ಹರಡಲಾಗಿತ್ತು . ಕೆಲವೊಂದನ್ನು ಆಲ್ಕೋಹಾಲ್ ದ್ರಾವಣದಲ್ಲಿ ಅದ್ದಲಾಯಿತು. ಮುಂದೆ ಅದನ್ನು ಪ್ರಯೋಗ ಪರೀಕ್ಷಾ ತಂತ್ರಜ್ಞನು ತೆಗೆದುಕೊಂಡು ಹೋದನು. ಸ್ವಲ್ಪ ಹೊತ್ತಿನ ನಂತರ ಎಲ್ಲ ಜಾರುಗಾಜುಗಳು ಬೇರೆ ಬೇರೆ ಬಣ್ಣಗಳಿಂದ ಸಿಂಗಾರಗೊಂಡು ನನ್ನೆದುರಿನ ಸ್ಲೈಡ್ ಟ್ರೇನಲ್ಲಿ ತಯಾರಾಗಿ ಕುಳಿತ್ತಿದ್ದವು. ಮೊದಲು ನಮ್ಮ ವಿದ್ಯಾರ್ಥಿಗಳು ಜಾರುಗಾಜುಗಳನ್ನು ಮೈಕ್ರೋಸ್ಕೋಪ್ ನಲ್ಲಿ ನೋಡಿ ತಮ್ಮ ತಮ್ಮ ವರದಿಗಳನ್ನು ಬರೆದರು. ಈಗ ನನ್ನ ಸರದಿ.. ನಾಜೂಕಾಗಿ ಮಗುವನ್ನೆತ್ತುವಂತೆ  ಒಂದೊಂದೇ slide ಗಳನ್ನು ಒಳಗಣ್ಣುಹೊರಗಣ್ಣಿಂದ  ನೋಡಲು ಶುರುಮಾಡಿದೆಅಬ್ಬಬ್ಬಾ  ! ಎಷ್ಟು ವಿಚಿತ್ರ ಜೀವಕೋಶಗಳುಎಲ್ಲವು ಬದುಕು ಮುಗಿದು ಹೋದಂತೆ ಮೂರಾಬಟ್ಟೆಯಾಗಿ ಚೆಲ್ಲಾಪಿಲ್ಲಿಯಾಗಿ ರಕ್ತದ ಮಾಡುವಲ್ಲಿ ಬಿದ್ದಿದ್ದವುಪದಗಳಲ್ಲಿ ಜೀವಕೋಶಗಳನ್ನು ವರ್ಣಿಸಲು ಕಷ್ಟವಾಗುವಷ್ಟು ಕೆಟ್ಟದಾಗಿ ಕಾಣುತಿತ್ತುಹೌದು ..!  ಅದು ಥೈರಾಯಿಡ್ ಅತೀ ಕೆಟ್ಟ ಕ್ಯಾನ್ಸರ್ಅನಾಪ್ಲಾಸ್ಟಿಕ್ ಕಾರ್ಸಿನೋಮಆಗಿತ್ತು…. ಅಂಕಲ್  ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಬಾರದೆ ತಪ್ಪು ಮಾಡಿದ್ದರು….. ಈಗ ಕಾಲ ಮಿಂಚಿತ್ತುಪ್ರತಿ ಬಾರಿ ರೀತಿಯಾಗಿ ಕ್ಯಾನ್ಸರ್ ಜೀವಕೋಶಗಳ ಕೆಟ್ಟ ಮುಖವನ್ನು ಇಂಚು ಇಂಚು ವರ್ಣನೆಯನ್ನು ವರದಿಯಲ್ಲಿ ಮಾಡುವಾಗ ಬುದ್ಧಿಗೆ ಖುಷಿ .. ಮನಸಿಗೆ ಕಸಿವಿಸಿಘಾಸಿ. …

ಇನ್ನೊಂದು ಕತೆಯ ಸಮಯಇದು ಎರಡು ವರ್ಷದ ಹಿಂದಿನ ವಿಚಾರ. ಸಂಜೆಯ ಸಮಯ. ಪ್ರಯೋಗಾಲಯದಲ್ಲಿ  ರಕ್ತ ಪರೀಕ್ಷೆ ಮಾಡುವಲ್ಲಿ  ನಿರತಳಾಗಿದ್ದೆ. ಮಧ್ಯವಯಸ್ಕನೊಬ್ಬ ಒಂದು ದೊಡ್ಡ  ಪ್ಲಾಸ್ಟಿಕ್ ಬಾಟಲಿಯನ್ನು  ತಂದು ಹೊರಗಿನ ಕೋಣೆಯಲ್ಲಿದ್ದ ಕೌಂಟರ್ನ ಕಟ್ಟೆಯ ಮೇಲೆ ಇರಿಸಿದ. ಬಾಟಲಿ ನಲ್ಲಿ ಒಂದು ದೊಡ್ಡ  ಮಾಂಸದ ಗಡ್ಡೆಇತ್ತು. ಒಂದು ದಿನದ ಹಿಂದೆ ಅವನ ಹೆಂಡತಿಯ ಹೊಟ್ಟೆಯಿಂದ ಗಂಟನ್ನು ತೆಗೆಯೆಲಾಗಿತ್ತಂತೆ. ನಮ್ಮ ಪ್ರಾಯೋಗಾಲಯ ತಂತ್ರಜ್ಞನು  ಗಂಟಿನ ಪರೀಕ್ಷೆ ಮಾಡಲು ಒಂದಷ್ಟು ಹಣ ಪಾವತಿಸುವಂತೆ ಸೂಚಿಸಿದನು. ಅದಕ್ಕೆ ವ್ಯಕ್ತಿ, ‘ ದೇಹದಿಂದ ಗಂಟು ತೆಗೆದ ಮೇಲೆ ಅದರ ಪರೀಕ್ಷೆ ಅಗತ್ಯವಿಲ್ಲ , ಈಗಾಗಲೇ ಸಾಕಷ್ಟು ಹಣ ಖರ್ಚಾಗಿದೆ ಎಂದು ಕೋಪದಿಂದ ನುಡಿದ. ಮಾತುಗಳನ್ನೆಲ್ಲ ಆಲಿಸಿದ ನಾನು ಆತನಿಗೆ ಗಂಟು ಪರೀಕ್ಷೆಯ ಅಗತ್ಯತೆ , ಅನಿವಾರ್ಯತೆಯ ಬಗ್ಗೆ ತಿಳಿಸಿದೆ. ಒಲ್ಲದ ಮನಸಿಂದ ಒಪ್ಪಿದ. ಕೆಲ ದಿನಗಳ ನಂತರ  ಗಡ್ಡೆಗೆ  ಸಂಬಂಧಿಸಿದ ಗಾಜಿನ ತುಣುಕುಗಳು ರೆಡಿ ಆದವು..ಒಂದಷ್ಟು ಕಂದು  ಬಣ್ಣದವೂ  ಇದ್ದವುಅದನ್ನು ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿದಾಗ ಅದು ಮಾಲಿಗನೆಂಟ್ ಜಿಸ್ಟ್ (malignant  gist ) ಎಂಬ ಕ್ಯಾನ್ಸರ್ ಆಗಿತ್ತು. ಒಂದು ವೇಳೆ ಅವನು ಗಂಟಿನ ಪರೀಕ್ಷೆ ಮಾಡಿಸದಿದ್ದರೆ ಮುಂದೆ ಆತನ ಹೆಂಡತಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಜೀವ ತೆರುವ ಸಂಭವವೂ ಇತ್ತು .. ಅಂದು ಆತನಿಗೆ ಸಿಕ್ಕ ಪರೀಕ್ಷೆಯ ಬಗೆಗಿನ ಸೂಕ್ತ  ಮಾಹಿತಿ ಅವನ ಹೆಂಡತಿಯ ಜೀವವನ್ನು ಕಾಪಾಡಿತ್ತು.

ಹೀಗೆ ಬಣ್ಣದ  ಬದುಕಿನಲ್ಲಿ ಗಾಜಿನ ಚೂರುಗಳು ವಹಿಸುವ ಪಾತ್ರ ಬಹಳ ಮುಖ್ಯ. ಇಲ್ಲಿ ಬರುವ ಪ್ರತಿ ಪಾತ್ರಗಳು, ಪಾತ್ರಧಾರಿಗಳು ಹೊಸ ಹೊಸ ವಿಚಾರಗಳನ್ನು ಹುಟ್ಟು ಹಾಕುತ್ತವೆಅದೆಷ್ಟೋ ರೋಚಕ ಅನುಭವಗಳಾಗುತ್ತವೆ.. ಅದೆಷ್ಟೋ ಹೊಸ ಆವಿಷ್ಕಾರಕ್ಕೆ ನಾಂದಿ  ಹೇಳುತ್ತದೆ….

ಕೊನೆಯದಾಗಿ ,

ಗಾಜಿನ ಚೂರಿನ ಬಣ್ಣದ ಚಿತ್ರಣ

ಹಲವು ಅಂಗಾಂಶಗಳ ಬೆರಗಿನ ಮುದ್ರಣ

ಯಾರದೋ ಜೀವದ ನೈಜ ಕಥನ

ಬಣ್ಣಿಸುವವನೇರೋಗಲಕ್ಷಣ ಶಾಸ್ತ್ರಜ್ಞ !

 

ಬಣ್ಣದ ಲೋಕದ ಸೂತ್ರಧಾರಿಗಳಾದ ಸಮಸ್ತ ರೋಗಲಕ್ಷಣ ಶಾಸ್ತ್ರಜ್ಞರಿಗೆ ಬರಹ  ಸಮರ್ಪಿತ

ಇಂತಿ ,

   Dr.  Ranjana  Ranade